ಶುಭ್ರ ಶ್ವೇತವರ್ಣದ ನೀರೆ
ನಾ ನಿನ್ನ ಸೌಂದರ್ಯದ ಸೆರೆ
ನಿನ್ನೊಂದಿಗೆ ಕಳೆದ ಸುಂದರ ಕ್ಷಣಗಳು
ಮರೆಯದ ಮನಸಿಗೆ ಒಂದು ಹೊರೆ
ಸೌಂದರ್ಯವ ಸವಿದ ಈ ಕಣ್ಣುಗಳು
ಮತ್ತೆ ತೆರೆಯಲು ನೀನೊಮ್ಮೆ ಬಾರೆ
ನಿದಿರೆಯಲಿ ನಾ ಇರಲು
ಮದಿರೆಯಾಗಿ ನೀ ಬರಲು
ನನ್ನೀ ಬದುಕು ಏರುಪೇರು
ನೀನೆಂದಿಗು ಮನದಲ್ಲಿರು
ಕನಸಲ್ಲಿ ಕಾಡದಿರು
ಮನಸಲ್ಲಿ ಮೂಡದಿರು
ಎದುರಲ್ಲಿ ಬಾರದಿರು
ನೀ ಬಿಟ್ಟು ಹೋದರು ನೆನಪುಗಳು ನೂರಾರು
ನೀ ಇಲ್ಲದೆ ಇದ್ದರು ಕಾಡಿರುವೆ ಜೋರು