ಈ ನಮ್ಮ ಧರೆಯು ನಗುತ್ತಿರುವವರೆಗು ನಾವಿಲ್ಲಿ ಸಂತೋಷದಿಂದ ಇರಬಹುದು. ಈ ಭೂಮಿಗೆ ನೋವು ಮಾಡದೆ ಅದರ ಒಳ್ಳೆಯದನ್ನು ಬಯಸೋಣ . ಈ ಭೂಮಿಯನ್ನು ಕಲುಷಿತ ಮಾಡದೆ ನಮ್ಮ ಸ್ವಾರ್ಥ ಸಾಧನೆಗೆ ಹಾಳು ಮಾಡದೆ ಇರೋಣ. ಮುಂದಿನ ಪೀಳಿಗೆಗೂ ಈ ಭೂಮಿ ಅವಶ್ಯ. ನಮ್ಮನ್ನು ನಾವೇ ಅವನತಿಯ ಕಡೆಗೆ ದೂಡದೆ ಇರೋಣ.
ನಿನ್ನ ನಗುವು ನಿರಂತರ
ನಾ ನೀಡುವುದಿಲ್ಲ ಬೇಸರ
ತುಟಿಗಳ ನಡುವಿನ ಅಂತರ
ನೋಡಲು ನಾನು ಕಾತುರ
ನೀನೊಬ್ಬಳೇ ಸುಂದರ
ಹೊಳೆಯುವ ಮಧುವಿನ ಸಾಗರ
ಎಲ್ಲಿರುವ ನಿನ್ನ ಪ್ರಿಯಕರ
ಅವನನ್ನು ನೋಡುವ ಆತುರ
ಸಂಜೆಯಲಿ ಕೆಂಪಾಗಿದೆ ಸಾಗರ
ಮೇಲೆ ನೋಡು ದಿವಾಕರ
ಸಂಜೆ ಬರುವನು ಚಂದಿರ
ಅವನೇ ನನ್ನ ಪ್ರಿಯಕರ