ಸೂರ್ಯಕಿರಣದ ಬಂಗಾರ ಬಣ್ಣಕಿಂತ ಮೇಲಾಗಿ ಹೊಳೆದವಳೆ
ಭೂಮಿ ಮೇಲಿನ ಹಸಿರಿಗಿಂತ ಹೆಚ್ಚಾಗಿ ನನ್ನ ಆವರಿಸಿದವಳೆ
ಕಡಲಿನ ಶ್ವೇತ ಅಲೆಗಳ ಕಳವಳವನು ಅರಿತಿರುವೆ
ನೀಲಿ ಆಕಾಶದ ಅನಂತವ ಅಪಾರವಾಗಿ ನೀ ತಿಳಿದಿರುವೆ

ಒಂದು ದಿನ ಕಳೆದು ಮತ್ತೊಂದು ದಿನ ಬಂತು ಈ ವರುಷದಿ
ಪ್ರತಿ ವರುಷದ ಪ್ರತಿಯೊಂದು ದಿನವು ನೀ ಇರು ಹರುಷದಿ
ಮೋಡದಂತೆ ನೀ ಚಲಿಸಲು ನಿಂತಿರುವೆ ನಾ ತಟಸ್ತನಾಗಿ
ನೀ ತಂಪಾಗಿಸಿದೆ ನನ್ನ ಮುಂಗಾರಿನ ಮೊದಲ ಮಳೆಯಾಗಿ

ಹಿಡಿಯಲಾರದೆ ಹೋದೆನು ನಿನ್ನಯ ತಂಪಿನ ಅನುಭವ
ಅರಿಯಲಾರದೆ ಹೋದೆನು ಈ ನಿನ್ನ ಕಣ್ಣೀರಿನ ಮಳೆಯ
ತನ್ನ ಕಣ್ಣೀರಿನಲಿ ಇಳೆಯ ತಂಪಾಗಿಸಿದ ಮೋಡದಂತೆ
ನೀ ನೊಂದರು ನನ್ನ ನೋಯಿಸದ ತ್ಯಾಗಮಯಿ ನೀನು
