ನಿರೀಕ್ಷೆಯು ದೊಡ್ಡದಾಗಿದೆ ಎಂಬುವುದು ತಿಳಿಯುವುದು ಆ ನಿರೀಕ್ಷೆ ಈಡೇರಡಿದ್ದಾಗ. ಏನೋ ಅಂದುಕೊಂಡೆನು ನಾನು, ಅಂತಹ ನಿರೀಕ್ಷೆ ಇಟ್ಟುಕೊಳ್ಳಲು ಅರ್ಹನಾಗಿದ್ದೇನು. ಆದರೆ ಅದು ನಿಜವಾಗಲಿಲ್ಲ. ಇಂದು ಈ ಗೆರೆಯನ್ನು ದಾಟಲು ಆಗಲಿಲ್ಲ ಆದರೆ ಮುಂದೊಂದು ದಿನ ನಿಜವಾಗಿಯೂ ಸಾಧಿಸುವೆ. ಛಲಕ್ಕೆ ಮಿತಿಯಿಲ್ಲ ಕನಸುಗಳಿಗೆ ಕೊನೆಯಿಲ್ಲ.
ದೇವರ ಜೊತೆಯಿರಲಿ
ನನ್ನ ಪ್ರಯತ್ನವಿರಲಿ
ಸೋತರು ಮತ್ತೆ ಏಳುವ ಬಲವಿರಲಿ
ಕನಸು ಕಾಣುವ ಕಣ್ಣಿರಲಿ
ನಡೆಯಲು ನಾಳೆಗಲಿರಲಿ.
ಇಂದು ನನ್ನ ಆಸೆ ಈಡೇರಲಿಲ್ಲ, ಮತ್ತೆ ಹೆಚ್ಚು ಸಾಧಿಸಲು ಇದು ಸ್ಫೂರ್ತಿಯಾಗಲಿ. ಉತ್ತಮ ಪ್ರಯತ್ನಗಳು ಮುಂದೆ ಬರಲಿ. ಹತ್ತು ಸೋಲಿಗೊಂದು ಗೆಲುವು ಕೊಡುವುದು ಹೆಚ್ಚು ಸುಖ. ಪ್ರತಿ ಬಾರಿ ಗೆಲ್ಲುವುದರಲ್ಲಿ ಏನು ಸುಖ.