ಬಾಡಿದ ಬದುಕಿನ ಬಿಸಿಲಲಿ ಬೆಂದಿರುವೆ
ಸಾವಿರರು ಕಷ್ಟಗಳ ನೋವಲಿ ನೊಂದಿರುವೆ
ಬದುಕಬೇಕೆಂಬ ಬಯಕೆಯಿಲ್ಲ
ಜೀವನವ ದೂಡುತಿರುವೆ
ಮುಂದೊಂದು ದಿನದ ನಿರೀಕ್ಷೆಯಿಂದ
ಆ ಸುದಿನ ಹಸಿರಾಗಬಹುದು ನನ್ನ ಜೀವನ
ಇಂದು ಇರಬಹುದು ನೋವು
ಯಾರು ಜೊತೆಯಿರದ ಸಂಕಟ
ನಾಳೆ ಇರಬಹುದು ಗೆಳೆಯರು ಬಂಧು ಬಾಂಧವರು
ಆಗಬಹುದು ನಾನು ಹಸನ್ಮುಖಿ
ನಾಳೆಯ ಯಾರು ಕಂಡವರು
ಇಂದಿನ ಕನಸುಗಳು ಆಗಬಹುದು
ನಾಳೆಯ ಸಂತಸದ ಜೀವನ
ನಾಳೆಯ ನೋಡಲಾದರೂ ಇರೋಣ
ಇಂದು ದುಡುಕದಿರೋಣ
ಉತ್ತಮ ನಾಳೆಯ ನಿರೀಕ್ಷೆಯೇ ಜೀವನ
