ನೆರವೇರದ ನಿರೀಕ್ಷೆಯ ನೋವು

ನಿರೀಕ್ಷೆಯು ದೊಡ್ಡದಾಗಿದೆ ಎಂಬುವುದು ತಿಳಿಯುವುದು ಆ ನಿರೀಕ್ಷೆ ಈಡೇರಡಿದ್ದಾಗ. ಏನೋ ಅಂದುಕೊಂಡೆನು ನಾನು, ಅಂತಹ ನಿರೀಕ್ಷೆ ಇಟ್ಟುಕೊಳ್ಳಲು ಅರ್ಹನಾಗಿದ್ದೇನು. ಆದರೆ ಅದು ನಿಜವಾಗಲಿಲ್ಲ. ಇಂದು ಈ ಗೆರೆಯನ್ನು ದಾಟಲು ಆಗಲಿಲ್ಲ  ಆದರೆ ಮುಂದೊಂದು ದಿನ...
ನಿರೀಕ್ಷೆಯು ದೊಡ್ಡದಾಗಿದೆ ಎಂಬುವುದು ತಿಳಿಯುವುದು ಆ ನಿರೀಕ್ಷೆ ಈಡೇರಡಿದ್ದಾಗ. ಏನೋ ಅಂದುಕೊಂಡೆನು ನಾನು, ಅಂತಹ ನಿರೀಕ್ಷೆ ಇಟ್ಟುಕೊಳ್ಳಲು ಅರ್ಹನಾಗಿದ್ದೇನು. ಆದರೆ ಅದು ನಿಜವಾಗಲಿಲ್ಲ. ಇಂದು ಈ ಗೆರೆಯನ್ನು ದಾಟಲು ಆಗಲಿಲ್ಲ  ಆದರೆ ಮುಂದೊಂದು ದಿನ ನಿಜವಾಗಿಯೂ ಸಾಧಿಸುವೆ. ಛಲಕ್ಕೆ ಮಿತಿಯಿಲ್ಲ ಕನಸುಗಳಿಗೆ ಕೊನೆಯಿಲ್ಲ. ದೇವರ ಜೊತೆಯಿರಲಿ ನನ್ನ ಪ್ರಯತ್ನವಿರಲಿ ಸೋತರು ಮತ್ತೆ ಏಳುವ ಬಲವಿರಲಿ ಕನಸು ಕಾಣುವ ಕಣ್ಣಿರಲಿ ನಡೆಯಲು ನಾಳೆಗಲಿರಲಿ. ಇಂದು ನನ್ನ ಆಸೆ ಈಡೇರಲಿಲ್ಲ, ಮತ್ತೆ ಹೆಚ್ಚು ಸಾಧಿಸಲು ಇದು ಸ್ಫೂರ್ತಿಯಾಗಲಿ. ಉತ್ತಮ ಪ್ರಯತ್ನಗಳು ಮುಂದೆ ಬರಲಿ. ಹತ್ತು ಸೋಲಿಗೊಂದು ಗೆಲುವು ಕೊಡುವುದು ಹೆಚ್ಚು ಸುಖ. ಪ್ರತಿ ಬಾರಿ ಗೆಲ್ಲುವುದರಲ್ಲಿ ಏನು ಸುಖ.

ಬದಲಾವಣೆ ಜಗದ ನಿಯಮ

ಭೂಮಿ ತಿರುಗುವುದು ಸೂರ್ಯನ ಸುತ್ತ ಬದಲಾಗುವುದು ಸಮಯ ಮಾನವನಿಗೆ ನೂರಾರು ಕಷ್ಟ ಬದಲಾಗುವುದು ಅದೃಷ್ಟ ಬಂದೆ ಬರುವುದು ಒಳ್ಳೆಯ ದಿನ ನಗುವುದು ಈ ಮನ ಮುಂದಿನ ತಿಳಿಯದ ಬರುವ ದಿನಗಳು ಇಂದಿನ ಪರೀಕ್ಷೆಗಳು ತಯಾರಿಸುವುದು...
ಭೂಮಿ ತಿರುಗುವುದು ಸೂರ್ಯನ ಸುತ್ತ ಬದಲಾಗುವುದು ಸಮಯ ಮಾನವನಿಗೆ ನೂರಾರು ಕಷ್ಟ ಬದಲಾಗುವುದು ಅದೃಷ್ಟ ಬಂದೆ ಬರುವುದು ಒಳ್ಳೆಯ ದಿನ ನಗುವುದು ಈ ಮನ ಮುಂದಿನ ತಿಳಿಯದ ಬರುವ ದಿನಗಳು ಇಂದಿನ ಪರೀಕ್ಷೆಗಳು ತಯಾರಿಸುವುದು ನಿನ್ನನು ನಾಳೆಗೆ ನೀನೆ ಹೇಳುವೆ ಇದೆಲ್ಲ ಒಂದು ಕಷ್ಟವೇ ಇದೆಲ್ಲ ಒಂದು ಸಮಸ್ಯೆಯೇ ಕಂಡಿರುವ ಎಂತೆಂತ ಕಷ್ಟಗಳ ಬದುಕಿರುವೆ ಇಂದು ಬದುಕುವೆನು ಪ್ರತಿ ನಾಳೆಯೂ ಬದಲಾಗುವುದು ಎಲ್ಲವೂ ಬದಲಾಗುವುದು ಸಮಯ ಬದಲಾಗುವೆನು ನಾನು ಬದಲಾವಣೆ ಜಗದ ನಿಯಮ
ಮರಣ ಹೊಂದಿದೆ ಮನಸು

ಮರಣ ಹೊಂದಿದೆ ಮನಸು

ಮುಂದೆ ಏನಾಗಬಹುದು ಎಂದು ತಿಳಿಯದ ನನ್ನ ಮನಸಿಗೆ, ನಾನು ಮುಂದೆ ಏನಾಗಬೇಕು ಎನ್ನುವ ಯೋಚನೆಯಿಲ್ಲ. ತನ್ನವರಿಗೆ ತಾವಾಗದ ಈ ಸಮಯದಲಿ ನನಗೆಲ್ಲರೂ ನನ್ನವರೇ. ಹೌದು ನಾನು ದೂರಾಲೋಚನೆಯ ವ್ಯಕ್ತಿಯಲ್ಲ ಆದರೆ ಕೆಟ್ಟವನಲ್ಲ. ನನ್ನ ಪ್ರಯತ್ನಗಳಿಗೆ ಒಳ್ಳೆಯ...
ಮುಂದೆ ಏನಾಗಬಹುದು ಎಂದು ತಿಳಿಯದ ನನ್ನ ಮನಸಿಗೆ, ನಾನು ಮುಂದೆ ಏನಾಗಬೇಕು ಎನ್ನುವ ಯೋಚನೆಯಿಲ್ಲ. ತನ್ನವರಿಗೆ ತಾವಾಗದ ಈ ಸಮಯದಲಿ ನನಗೆಲ್ಲರೂ ನನ್ನವರೇ. ಹೌದು ನಾನು ದೂರಾಲೋಚನೆಯ ವ್ಯಕ್ತಿಯಲ್ಲ ಆದರೆ ಕೆಟ್ಟವನಲ್ಲ. ನನ್ನ ಪ್ರಯತ್ನಗಳಿಗೆ ಒಳ್ಳೆಯ ಮಾತನು ಆಡುವವರೇ ಇಲ್ಲ ಆದರೂ ನಾನಿರುವೇ ಒಳ್ಳೆಯ ಯೋಚಿಸುತ. ನಾನು ಎಂಬುದು ಬಿಟ್ಟು ನನ್ನವರು ಎಂದು ಯೋಚಿಸುತ್ತಿದ ನನಗೆ ಇಂದು ಬಿಡುಗಡೆಯ ದಿನ. ನನ್ನವರು ಎನ್ನುವವರು ಮನಸಿನಿಂದ ದೂರವಾದರೆ? ಇಲ್ಲ. ಆದರೆ ಮನಸೇ ಮರಣವಾದಾಗ ಇನ್ನೂ ಏನಾದರು ಇದೆಯೇ ಆ ಮನಸಿನಲಿ. ಯಾರಾದರೂ ಇರುವರೆ ಆ ಮನಸಿನಲಿ? ಅರಿವಿಲ್ಲ ಈ ಮನಸಿಗೆ. ಅದು ತಿಳಿದಿದ್ದರೆ ಇಂದು ಇಲ್ಲವಾಗುತ್ತಿತ್ತೆ ಈ ಮನಸು? ನೊಂದಿರುವ ನನ್ನ ನತದೃಷ್ಟ ಜೀವನಕ್ಕೆ ಯಾರಿಲ್ಲ. ಇದು ನನ್ನ ತಪ್ಪೇ? ನಾನು ಕೆಟ್ಟವನೇ? ಇತರರ ಹಿತವಾಗಿ ಬಯಸಿದ ನನ್ನ ಮನಸಿನ ತಪ್ಪೇ? ನನ್ನ ಬಗ್ಗೆ ಯೋಚಿಸದ ನಾನೇ ದುಷ್ಟನೇ? ತಪ್ಪು ಸರಿಗಳ ನಿರ್ಧಾರ ಮಾಡುವವನಾರು? ದೇವರು? ಏಕೋ ಅನಿಸುತ್ತಿದೆ ಆ ದೇವರೇ ನನ್ನ ಪರವಾಗಿ...
ಕನ್ನಡ ಕವನ – ಮುಂದೊಂದು ದಿನದ ನಿರೀಕ್ಷೆ

ಕನ್ನಡ ಕವನ – ಮುಂದೊಂದು ದಿನದ ನಿರೀಕ್ಷೆ

ಬಾಡಿದ ಬದುಕಿನ ಬಿಸಿಲಲಿ ಬೆಂದಿರುವೆಸಾವಿರರು ಕಷ್ಟಗಳ ನೋವಲಿ ನೊಂದಿರುವೆಬದುಕಬೇಕೆಂಬ ಬಯಕೆಯಿಲ್ಲಜೀವನವ ದೂಡುತಿರುವೆಮುಂದೊಂದು ದಿನದ ನಿರೀಕ್ಷೆಯಿಂದಆ ಸುದಿನ ಹಸಿರಾಗಬಹುದು ನನ್ನ ಜೀವನಇಂದು ಇರಬಹುದು ನೋವುಯಾರು ಜೊತೆಯಿರದ ಸಂಕಟನಾಳೆ ಇರಬಹುದು ಗೆಳೆಯರು ಬಂಧು ಬಾಂಧವರುಆಗಬಹುದು ನಾನು ಹಸನ್ಮುಖಿನಾಳೆಯ...
ಬಾಡಿದ ಬದುಕಿನ ಬಿಸಿಲಲಿ ಬೆಂದಿರುವೆಸಾವಿರರು ಕಷ್ಟಗಳ ನೋವಲಿ ನೊಂದಿರುವೆಬದುಕಬೇಕೆಂಬ ಬಯಕೆಯಿಲ್ಲಜೀವನವ ದೂಡುತಿರುವೆಮುಂದೊಂದು ದಿನದ ನಿರೀಕ್ಷೆಯಿಂದಆ ಸುದಿನ ಹಸಿರಾಗಬಹುದು ನನ್ನ ಜೀವನಇಂದು ಇರಬಹುದು ನೋವುಯಾರು ಜೊತೆಯಿರದ ಸಂಕಟನಾಳೆ ಇರಬಹುದು ಗೆಳೆಯರು ಬಂಧು ಬಾಂಧವರುಆಗಬಹುದು ನಾನು ಹಸನ್ಮುಖಿನಾಳೆಯ ಯಾರು ಕಂಡವರುಇಂದಿನ ಕನಸುಗಳು ಆಗಬಹುದುನಾಳೆಯ ಸಂತಸದ ಜೀವನನಾಳೆಯ ನೋಡಲಾದರೂ ಇರೋಣಇಂದು ದುಡುಕದಿರೋಣಉತ್ತಮ ನಾಳೆಯ ನಿರೀಕ್ಷೆಯೇ ಜೀವನ [xyz-ips snippet="shop"]

ನೆರಳು ಇರುಳಿನ ಆಟ – ಕನ್ನಡ ಕವನ

ಬಿಸಿಲಿನಲಿ ನೀ ಕುಳಿತಿರಲು ನಾ ನೆರಳಾದರೆ ನನ್ನ ನೀ ನೋಡಬಲ್ಲೆಯೇಸೂರ್ಯನ ಸುಡು ನೋಟಕೆ ನಾ ಅಡ್ಡ ಬಂದರೆ ನೆರಳನು ನೀ ಮರೆಯ ಬಲ್ಲೆಯೇ ಪ್ರತಿದಿನ ನೆರಳು ಇರುಳಿನ ಆಟ ಈ ಆಟ ಮುಗಿದರೆನೀ ಆಟಗಾರನಾಗಿ...
ಬಿಸಿಲಿನಲಿ ನೀ ಕುಳಿತಿರಲು ನಾ ನೆರಳಾದರೆ ನನ್ನ ನೀ ನೋಡಬಲ್ಲೆಯೇಸೂರ್ಯನ ಸುಡು ನೋಟಕೆ ನಾ ಅಡ್ಡ ಬಂದರೆ ನೆರಳನು ನೀ ಮರೆಯ ಬಲ್ಲೆಯೇ ಪ್ರತಿದಿನ ನೆರಳು ಇರುಳಿನ ಆಟ ಈ ಆಟ ಮುಗಿದರೆನೀ ಆಟಗಾರನಾಗಿ ಬದುಕ ಬಲ್ಲೆಯೇ

ಧರೆಯ ನಗು – ಕನ್ನಡ ಕವನ

ಈ ನಮ್ಮ ಧರೆಯು ನಗುತ್ತಿರುವವರೆಗು ನಾವಿಲ್ಲಿ ಸಂತೋಷದಿಂದ ಇರಬಹುದು. ಈ ಭೂಮಿಗೆ ನೋವು ಮಾಡದೆ ಅದರ ಒಳ್ಳೆಯದನ್ನು ಬಯಸೋಣ . ಈ ಭೂಮಿಯನ್ನು ಕಲುಷಿತ ಮಾಡದೆ ನಮ್ಮ ಸ್ವಾರ್ಥ ಸಾಧನೆಗೆ ಹಾಳು ಮಾಡದೆ ಇರೋಣ....
ಈ ನಮ್ಮ ಧರೆಯು ನಗುತ್ತಿರುವವರೆಗು ನಾವಿಲ್ಲಿ ಸಂತೋಷದಿಂದ ಇರಬಹುದು. ಈ ಭೂಮಿಗೆ ನೋವು ಮಾಡದೆ ಅದರ ಒಳ್ಳೆಯದನ್ನು ಬಯಸೋಣ . ಈ ಭೂಮಿಯನ್ನು ಕಲುಷಿತ ಮಾಡದೆ ನಮ್ಮ ಸ್ವಾರ್ಥ ಸಾಧನೆಗೆ ಹಾಳು ಮಾಡದೆ ಇರೋಣ. ಮುಂದಿನ ಪೀಳಿಗೆಗೂ ಈ ಭೂಮಿ ಅವಶ್ಯ. ನಮ್ಮನ್ನು ನಾವೇ ಅವನತಿಯ ಕಡೆಗೆ ದೂಡದೆ ಇರೋಣ. ನಿನ್ನ ನಗುವು ನಿರಂತರನಾ ನೀಡುವುದಿಲ್ಲ ಬೇಸರ ತುಟಿಗಳ ನಡುವಿನ ಅಂತರನೋಡಲು ನಾನು ಕಾತುರನೀನೊಬ್ಬಳೇ ಸುಂದರಹೊಳೆಯುವ ಮಧುವಿನ ಸಾಗರಎಲ್ಲಿರುವ ನಿನ್ನ ಪ್ರಿಯಕರಅವನನ್ನು ನೋಡುವ ಆತುರಸಂಜೆಯಲಿ ಕೆಂಪಾಗಿದೆ ಸಾಗರ ಮೇಲೆ ನೋಡು ದಿವಾಕರಸಂಜೆ ಬರುವನು ಚಂದಿರಅವನೇ ನನ್ನ ಪ್ರಿಯಕರ

ಕಣ್ಣುಗಳು ಏನೋ ಹೇಳಿದೆ – ಕನ್ನಡ ಕವನ

ಕಣ್ಣುಗಳು ಏನೋ ಹೇಳಿದೆ ಮುಗುಳ್ನಗೆ ಅದ ಮುಚ್ಚಿಟ್ಟಿದೆ ಹೇಳಿದರು ಹೇಳದಿದ್ದರೂ ಏನು ಪ್ರಯೋಜನ ಸ್ಪಂದಿಸುವ ಜನರಿಲ್ಲ ಜಗದಲಿ ಸೂರ್ಯನ ಸಂಜೆಯಲಿ ದಿನವು ಮುಗಿದಿದೆ ಚಂದ್ರನ ನೋಟಕೆ ಇಳೆ ತಂಪಾಗಿದೆ ದಿನ ಕಳೆದರೆ ಕತ್ತಲು ಕತ್ತಲು...
ಕಣ್ಣುಗಳು ಏನೋ ಹೇಳಿದೆ ಮುಗುಳ್ನಗೆ ಅದ ಮುಚ್ಚಿಟ್ಟಿದೆ ಹೇಳಿದರು ಹೇಳದಿದ್ದರೂ ಏನು ಪ್ರಯೋಜನ ಸ್ಪಂದಿಸುವ ಜನರಿಲ್ಲ ಜಗದಲಿ ಸೂರ್ಯನ ಸಂಜೆಯಲಿ ದಿನವು ಮುಗಿದಿದೆ ಚಂದ್ರನ ನೋಟಕೆ ಇಳೆ ತಂಪಾಗಿದೆ ದಿನ ಕಳೆದರೆ ಕತ್ತಲು ಕತ್ತಲು ಮುಗಿದು ಮತ್ತೆ ಬೆಳಕು ಈ ದಿನ ಕಳೆದು ಇನ್ನೊಂದು ದಿನ ಆದರೆ ಪ್ರತಿ ದಿನವೂ ಬೇರೊಂದು ದಿನ ಹೊಸತೊಂದು ಆಶಯ ನವತನದ ನಿರೀಕ್ಷೆ ಪ್ರತಿ ದಿನವೂ ಹೊಸತನ್ನು ತರಲಿ ಯಶಸ್ಸಿನ ಕಡೆಗೆ ಪ್ರಯತ್ನವು ಇರಲಿ ಕತ್ತಲು ಜೊತೆಗೆ ಇರುವುದು ನೆನಪಿರಲಿ ಬೆಳಕು ಕತ್ತಲುಗಳ ಪರಿಚಯವು ಇರಲಿ Photo Credits - Tanya Sinha 1420

ಶುಭ್ರ ಶ್ವೇತವರ್ಣದ ನೀರೆ – ಕನ್ನಡ ಕವನ

ಶುಭ್ರ ಶ್ವೇತವರ್ಣದ ನೀರೆನಾ ನಿನ್ನ ಸೌಂದರ್ಯದ ಸೆರೆ ನಿನ್ನೊಂದಿಗೆ ಕಳೆದ ಸುಂದರ ಕ್ಷಣಗಳುಮರೆಯದ ಮನಸಿಗೆ ಒಂದು ಹೊರೆಸೌಂದರ್ಯವ ಸವಿದ ಈ ಕಣ್ಣುಗಳುಮತ್ತೆ ತೆರೆಯಲು ನೀನೊಮ್ಮೆ ಬಾರೆ ನಿದಿರೆಯಲಿ ನಾ ಇರಲುಮದಿರೆಯಾಗಿ ನೀ ಬರಲುನನ್ನೀ ಬದುಕು...
ಶುಭ್ರ ಶ್ವೇತವರ್ಣದ ನೀರೆನಾ ನಿನ್ನ ಸೌಂದರ್ಯದ ಸೆರೆ ನಿನ್ನೊಂದಿಗೆ ಕಳೆದ ಸುಂದರ ಕ್ಷಣಗಳುಮರೆಯದ ಮನಸಿಗೆ ಒಂದು ಹೊರೆಸೌಂದರ್ಯವ ಸವಿದ ಈ ಕಣ್ಣುಗಳುಮತ್ತೆ ತೆರೆಯಲು ನೀನೊಮ್ಮೆ ಬಾರೆ ನಿದಿರೆಯಲಿ ನಾ ಇರಲುಮದಿರೆಯಾಗಿ ನೀ ಬರಲುನನ್ನೀ ಬದುಕು ಏರುಪೇರುನೀನೆಂದಿಗು ಮನದಲ್ಲಿರುಕನಸಲ್ಲಿ ಕಾಡದಿರುಮನಸಲ್ಲಿ ಮೂಡದಿರುಎದುರಲ್ಲಿ ಬಾರದಿರು ನೀ ಬಿಟ್ಟು ಹೋದರು ನೆನಪುಗಳು ನೂರಾರುನೀ ಇಲ್ಲದೆ ಇದ್ದರು ಕಾಡಿರುವೆ ಜೋರು

ಸೂರ್ಯಕಿರಣದ ಬಂಗಾರ ಬಣ್ಣಕಿಂತ ಮೇಲಾಗಿ ಹೊಳೆದವಳೆ – ಕನ್ನಡ ಕವನ

ಸೂರ್ಯಕಿರಣದ ಬಂಗಾರ ಬಣ್ಣಕಿಂತ ಮೇಲಾಗಿ ಹೊಳೆದವಳೆಭೂಮಿ ಮೇಲಿನ ಹಸಿರಿಗಿಂತ ಹೆಚ್ಚಾಗಿ ನನ್ನ ಆವರಿಸಿದವಳೆಕಡಲಿನ ಶ್ವೇತ ಅಲೆಗಳ ಕಳವಳವನು ಅರಿತಿರುವೆನೀಲಿ ಆಕಾಶದ ಅನಂತವ ಅಪಾರವಾಗಿ ನೀ ತಿಳಿದಿರುವೆ ಒಂದು ದಿನ ಕಳೆದು ಮತ್ತೊಂದು ದಿನ ಬಂತು...
ಸೂರ್ಯಕಿರಣದ ಬಂಗಾರ ಬಣ್ಣಕಿಂತ ಮೇಲಾಗಿ ಹೊಳೆದವಳೆಭೂಮಿ ಮೇಲಿನ ಹಸಿರಿಗಿಂತ ಹೆಚ್ಚಾಗಿ ನನ್ನ ಆವರಿಸಿದವಳೆಕಡಲಿನ ಶ್ವೇತ ಅಲೆಗಳ ಕಳವಳವನು ಅರಿತಿರುವೆನೀಲಿ ಆಕಾಶದ ಅನಂತವ ಅಪಾರವಾಗಿ ನೀ ತಿಳಿದಿರುವೆ ಒಂದು ದಿನ ಕಳೆದು ಮತ್ತೊಂದು ದಿನ ಬಂತು ಈ ವರುಷದಿಪ್ರತಿ ವರುಷದ ಪ್ರತಿಯೊಂದು ದಿನವು ನೀ ಇರು ಹರುಷದಿಮೋಡದಂತೆ ನೀ ಚಲಿಸಲು ನಿಂತಿರುವೆ ನಾ ತಟಸ್ತನಾಗಿನೀ ತಂಪಾಗಿಸಿದೆ ನನ್ನ ಮುಂಗಾರಿನ ಮೊದಲ ಮಳೆಯಾಗಿ ಹಿಡಿಯಲಾರದೆ ಹೋದೆನು ನಿನ್ನಯ ತಂಪಿನ ಅನುಭವಅರಿಯಲಾರದೆ ಹೋದೆನು ಈ ನಿನ್ನ ಕಣ್ಣೀರಿನ ಮಳೆಯತನ್ನ ಕಣ್ಣೀರಿನಲಿ ಇಳೆಯ ತಂಪಾಗಿಸಿದ ಮೋಡದಂತೆನೀ ನೊಂದರು ನನ್ನ ನೋಯಿಸದ ತ್ಯಾಗಮಯಿ ನೀನು Mohnaa Shrivastava - More Photos and Videos View this post on Instagram A post shared by Mohnaa (@mohnaa.shrivastava)

ಕಳೆದ ನಿನ್ನೆಯ ಚಿಂತೆ – ಕನ್ನಡ ಕವನ

ನಾನು ಬಸ್ಸಿನಲ್ಲಿ ಚಲಿಸುತ್ತಿರುವಾಗ , ಒಂದು ನದಿಯ ಮುರಿದ ಸೇತುವೆಯ ಬಳಿಯಲ್ಲಿದ್ದ ತುಂಡಾದ ಮರದ ಕೊಂಬೆಯನ್ನು ಕಂಡಾಗ ಹುಟ್ಟಿದ ಕವನ ಇದು. ಮುರಿದ ಮರದಿಂದ ಫಲದ ಪ್ರತೀಕ್ಷೆ ಏಕೆಮುಗಿದ ಸಂಬಂಧದಿಂದ ಸಂಭ್ರಮದ ನಿರೀಕ್ಷೆ ಏಕೆಕಳೆದು...
ನಾನು ಬಸ್ಸಿನಲ್ಲಿ ಚಲಿಸುತ್ತಿರುವಾಗ , ಒಂದು ನದಿಯ ಮುರಿದ ಸೇತುವೆಯ ಬಳಿಯಲ್ಲಿದ್ದ ತುಂಡಾದ ಮರದ ಕೊಂಬೆಯನ್ನು ಕಂಡಾಗ ಹುಟ್ಟಿದ ಕವನ ಇದು. ಮುರಿದ ಮರದಿಂದ ಫಲದ ಪ್ರತೀಕ್ಷೆ ಏಕೆಮುಗಿದ ಸಂಬಂಧದಿಂದ ಸಂಭ್ರಮದ ನಿರೀಕ್ಷೆ ಏಕೆಕಳೆದು ಹೋದ ನಂಬಿಕೆಗೆ ವ್ಯಥೆ ಏಕೆನಿನ್ನ ಪ್ರೀತಿ ವಿಶ್ವಾಸಕೆ ಕೊನೆ ಏಕೆ ಕಳೆದ ನಿನ್ನೆಯ ಚಿಂತೆ ಏಕೆಬರುವ ನಾಳೆಯ ಭಯವು ಏಕೆಯಾರೋ ಬಂದರು ಯಾರೋ ಹೋದರುನಿನ್ನೊಳಗೆ ಈ ಬದಲಾವಣೆ ಏಕೆ ನಿನ್ನಂತೆ ನೀನಿರು ಎಲ್ಲರನು ಪ್ರೀತಿಸು ಎಲ್ಲ ಜೀವ ಜೀವಿಗಳನು ಗೌರವಿಸು ಈ ಪದ್ಯಗಳು ಪ್ರೀತಿ, ವಿಶ್ವಾಸ, ಮತ್ತು ಜೀವನದ ವಿವಿಧ ಅನುಭವಗಳ ಬಗ್ಗೆ ಚಿಂತನೆ ಮತ್ತು ಅನುಭವವನ್ನು ಸುಂದರವಾಗಿ ವರ್ಣಿಸುತ್ತವೆ. ಈ ಪದ್ಯಗಳಲ್ಲಿ, ಕಳೆದ ಅನುಭವಗಳ ಮೇಲೆ ಹೊರಗೆ ಮುಖಾಮುಖಿಯಾಗುವ ಮತ್ತು ಬರುವ ಭವಿಷ್ಯದಲ್ಲಿ ಭಯವಿರುವ ಸಂದರ್ಭಗಳನ್ನು ಸ್ವಾಗತಿಸುವ ನಮ್ಮ ಪ್ರತಿಬಿಂಬವನ್ನು ವರ್ಣಿಸಲಾಗಿದೆ. ಇವು ಪ್ರೀತಿಯನ್ನು ಮತ್ತು ಸಹಾನುಭೂತಿಯನ್ನು ಎಲ್ಲರಿಗೂ ಹಂಚುತ್ತವೆ, ಮತ್ತು ಜೀವನದ ಸಮಸ್ಯೆಗಳ ಸಾಮರ್ಥ್ಯದ ಅನುಭವವನ್ನು ಸಾರುತ್ತವೆ. ಆದರೆ, ಇವುಗಳನ್ನು ಓದುವಾಗ, ಪ್ರೀತಿ...

ಬಣ್ಣಗಳಲ್ಲಿ ಬೆರೆತವಳು – ಕನ್ನಡ ಕವನ

ಬಣ್ಣಗಳಲ್ಲಿ ಬೆರೆತವಳೆಕನಸಿನಲ್ಲಿ ಕಂಡವಳೆನವಿಲಾಗಿ ನಡೆದವಳೆನಯವಾಗಿ ನುಡಿದವಳೆಮೌನಿಯಾಗಿ ಮುನಿದವಳೆಸಂಸಾರ ಸಾಗಿಸಿದವಳೆಮನದಲ್ಲಿ ಮನೆಯಾದವಳೆಹೇಳದೆ ಹೊರಟವಳೆಕಂಬನಿಯ ಕಂಡವಳೆಮರೆಯಲಾಗದೆ ನೆನಪಾದವಳೆನನಗೆ ನೀನೊಬ್ಬಳೆನಿನಗೊಂದು ಚಪ್ಪಾಳೆ ಈ ಪದ್ಯಗಳು ಒಬ್ಬ ಪ್ರಿಯ ವ್ಯಕ್ತಿಯ ಬಗ್ಗೆ ಕೊಡುವ ಪ್ರೀತಿಯ ಮತ್ತು ಗೌರವದ ಅಭಿವ್ಯಕ್ತಿ. ಈ...
ಬಣ್ಣಗಳಲ್ಲಿ ಬೆರೆತವಳೆಕನಸಿನಲ್ಲಿ ಕಂಡವಳೆನವಿಲಾಗಿ ನಡೆದವಳೆನಯವಾಗಿ ನುಡಿದವಳೆಮೌನಿಯಾಗಿ ಮುನಿದವಳೆಸಂಸಾರ ಸಾಗಿಸಿದವಳೆಮನದಲ್ಲಿ ಮನೆಯಾದವಳೆಹೇಳದೆ ಹೊರಟವಳೆಕಂಬನಿಯ ಕಂಡವಳೆಮರೆಯಲಾಗದೆ ನೆನಪಾದವಳೆನನಗೆ ನೀನೊಬ್ಬಳೆನಿನಗೊಂದು ಚಪ್ಪಾಳೆ ಈ ಪದ್ಯಗಳು ಒಬ್ಬ ಪ್ರಿಯ ವ್ಯಕ್ತಿಯ ಬಗ್ಗೆ ಕೊಡುವ ಪ್ರೀತಿಯ ಮತ್ತು ಗೌರವದ ಅಭಿವ್ಯಕ್ತಿ. ಈ ವ್ಯಕ್ತಿ ಅತ್ಯಂತ ಸುಂದರವಾಗಿರುವಳು, ಕನಸಿನಲ್ಲಿ ನಮಗೆ ಕಾಣುವಳು ಮತ್ತು ಸುಖದ ಸಾಗರದಂತೆ ನವಿಲಾಗಿ ನಡೆದು ನಮ್ಮ ಜೀವನಕ್ಕೆ ಹೊಸ ಹರಿಯನ್ನು ತರುತ್ತಾಳೆ. ಇವಳು ಸದಾ ನಯವಾಗಿ ನುಡಿಯುತ್ತಾಳೆ ಮತ್ತು ತನ್ನ ಸಂಸಾರದ ಕಾರ್ಯವನ್ನು ಸಾಗಿಸುತ್ತಾಳೆ. ಆದರೆ, ಇವಳು ಮೌನಿಯಾಗಿ ಮುನಿಯುವಾಗ ಆಕೆಯ ಆಳವಾದ ಭಾವಗಳು ಮತ್ತು ವ್ಯಕ್ತಿತ್ವ ವ್ಯಕ್ತವಾಗುತ್ತದೆ. ಆಕೆಯ ಸ್ಮೃತಿಯ ಅನಂತ ಕಂಬನಿ ಮರೆಯಲಾಗದು ಮತ್ತು ನಾನು ಆಕೆಯನ್ನು ಹೊಗಳುತ್ತೇನೆ, ಆಕೆಯಿಂದ ನನಗೆ ಪಡೆಯುವ ಚಪ್ಪಾಳೆಯ ಮಾತ್ರ ಎಂಬುದನ್ನು ದಾಖಲಿಸುತ್ತದೆ. ಈ ಪದ್ಯಗಳು ಪ್ರಿಯತೆ ಮತ್ತು ಆದರದ ಭಾವನೆಯನ್ನು ಹೊಂದಿವೆ, ಮತ್ತು ಸಂಬಂಧಿತ ವ್ಯಕ್ತಿಯ ಮೇಲೆ ನಮ್ಮ ಪ್ರೀತಿಯ ಅಭಿವ್ಯಕ್ತಿಯಾಗಿವೆ.

ಹೂ ಮನಸಿನ ಹುಡುಗಿ – ಕನ್ನಡ ಕವನ

ಹೂ ಮನಸಿನ ಹುಡುಗಿ ಹೂಂ ಅನ್ನುವೆ ಯಾವಾಗಕಣ್ಣ ನೋಟದಲೆ ಕೊಲಬೇಡ ಕೈಯ ಹಿಡಿಯುವೆ ಯಾವಾಗನಿನ್ನೊಲವ ಬಯಸಿದೆ ಹಲವು ಬಣ್ಣದ ಹೂಗಳುಅವುಗಳೆಲ್ಲವ ಸೋಲಿಸುತಿದೆ ನಿನ್ನ ಮೋಹಕ ಕಣ್ಣುಗಳು ನೀ ಕಾಣದಿರೆ ಮನದೊಳಗೆ ಏನೋ ಕಳವಳನೀ ಎದುರು...
ಹೂ ಮನಸಿನ ಹುಡುಗಿ ಹೂಂ ಅನ್ನುವೆ ಯಾವಾಗಕಣ್ಣ ನೋಟದಲೆ ಕೊಲಬೇಡ ಕೈಯ ಹಿಡಿಯುವೆ ಯಾವಾಗನಿನ್ನೊಲವ ಬಯಸಿದೆ ಹಲವು ಬಣ್ಣದ ಹೂಗಳುಅವುಗಳೆಲ್ಲವ ಸೋಲಿಸುತಿದೆ ನಿನ್ನ ಮೋಹಕ ಕಣ್ಣುಗಳು ನೀ ಕಾಣದಿರೆ ಮನದೊಳಗೆ ಏನೋ ಕಳವಳನೀ ಎದುರು ಬಂದರೆ ಅದೇನೋ ಭೀತಿನೀ ಇದ್ದರೂ ಇಲ್ಲದಿದ್ದರೂ ಈ ಬದುಕಿನಲಿನಾ ಮುಳುಗಿರುವೆನು ನಿನ್ನಯ ಪ್ರೀತಿಯಲಿ ಜೀವಿಸಲು ನಿನ್ನ ಯೋಚನೆಗಳೇ ಸಾಕುಈ ಪ್ರೀತಿಗೆ ನಿನ್ನ ಒಪ್ಪಿಗೆಯ ಸಹಿ ಹಾಕುನೀ ಬೇಕೆ ಬೇಕು ಎನ್ನುವುದು ಮೋಹವಾದೀತುನೀನೊಬ್ಬಳೆ ಸಾಕು ಎನ್ನುವುದು ನನ್ನ ಪ್ರೀತಿ ಗುರುತು ಹೂವಿನಂತೆ ಮೃದು ನೀನುಹೂವಿಗಿಂತಲೂ ಘಮ ನೀನುನನ್ನ ಕನಸಿನ ಕಲ್ಪನೆ ನೀನುನಿನ್ನ ತಲುಪದಿರುವ ಪತ್ರ ನಾನು ಹೂವ ಜೇನ ಹೀರಿದ ದುಂಬಿಗಳು ನೂರಾರುನಿನ್ನ ಸೇರಲು ಕಾದಿರುವ ನಾನಾರುನೀ ನನ್ನ ಕಲ್ಪನೆ ನಾ ನಿನ್ನ ಜೊತೆಗಾರಹೂ ಮನಸಿನ ಹುಡುಗಿಯ ಕನಸುಗಾರ