ಹೂ ಮನಸಿನ ಹುಡುಗಿ – ಕನ್ನಡ ಕವನ


ಹೂ ಮನಸಿನ ಹುಡುಗಿ ಹೂಂ ಅನ್ನುವೆ ಯಾವಾಗ
ಕಣ್ಣ ನೋಟದಲೆ ಕೊಲಬೇಡ ಕೈಯ ಹಿಡಿಯುವೆ ಯಾವಾಗ
ನಿನ್ನೊಲವ ಬಯಸಿದೆ ಹಲವು ಬಣ್ಣದ ಹೂಗಳು
ಅವುಗಳೆಲ್ಲವ ಸೋಲಿಸುತಿದೆ ನಿನ್ನ ಮೋಹಕ ಕಣ್ಣುಗಳು


ನೀ ಕಾಣದಿರೆ ಮನದೊಳಗೆ ಏನೋ ಕಳವಳ
ನೀ ಎದುರು ಬಂದರೆ ಅದೇನೋ ಭೀತಿ
ನೀ ಇದ್ದರೂ ಇಲ್ಲದಿದ್ದರೂ ಈ ಬದುಕಿನಲಿ
ನಾ ಮುಳುಗಿರುವೆನು ನಿನ್ನಯ ಪ್ರೀತಿಯಲಿ


ಜೀವಿಸಲು ನಿನ್ನ ಯೋಚನೆಗಳೇ ಸಾಕು
ಈ ಪ್ರೀತಿಗೆ ನಿನ್ನ ಒಪ್ಪಿಗೆಯ ಸಹಿ ಹಾಕು
ನೀ ಬೇಕೆ ಬೇಕು ಎನ್ನುವುದು ಮೋಹವಾದೀತು
ನೀನೊಬ್ಬಳೆ ಸಾಕು ಎನ್ನುವುದು ನನ್ನ ಪ್ರೀತಿ ಗುರುತು


ಹೂವಿನಂತೆ ಮೃದು ನೀನು
ಹೂವಿಗಿಂತಲೂ ಘಮ ನೀನು
ನನ್ನ ಕನಸಿನ ಕಲ್ಪನೆ ನೀನು
ನಿನ್ನ ತಲುಪದಿರುವ ಪತ್ರ ನಾನು


ಹೂವ ಜೇನ ಹೀರಿದ ದುಂಬಿಗಳು ನೂರಾರು
ನಿನ್ನ ಸೇರಲು ಕಾದಿರುವ ನಾನಾರು
ನೀ ನನ್ನ ಕಲ್ಪನೆ ನಾ ನಿನ್ನ ಜೊತೆಗಾರ
ಹೂ ಮನಸಿನ ಹುಡುಗಿಯ ಕನಸುಗಾರ


Leave a Reply

Your email address will not be published. Required fields are marked *

Previous post Nandita Shweta – Kannada Actress who did not get chances in Kannada Film Industry ನಂದಿತಾ ಶ್ವೇತ ಕನ್ನಡದಲ್ಲಿ ಅವಕಾಶ ವಂಚಿತ ನಟಿ
Next post ಬಣ್ಣಗಳಲ್ಲಿ ಬೆರೆತವಳು – ಕನ್ನಡ ಕವನ

Recent Comments

No comments to show.