ಮುಂದೆ ಏನಾಗಬಹುದು ಎಂದು ತಿಳಿಯದ ನನ್ನ ಮನಸಿಗೆ, ನಾನು ಮುಂದೆ ಏನಾಗಬೇಕು ಎನ್ನುವ ಯೋಚನೆಯಿಲ್ಲ. ತನ್ನವರಿಗೆ ತಾವಾಗದ ಈ ಸಮಯದಲಿ ನನಗೆಲ್ಲರೂ ನನ್ನವರೇ. ಹೌದು ನಾನು ದೂರಾಲೋಚನೆಯ ವ್ಯಕ್ತಿಯಲ್ಲ ಆದರೆ ಕೆಟ್ಟವನಲ್ಲ. ನನ್ನ ಪ್ರಯತ್ನಗಳಿಗೆ ಒಳ್ಳೆಯ ಮಾತನು ಆಡುವವರೇ ಇಲ್ಲ ಆದರೂ ನಾನಿರುವೇ ಒಳ್ಳೆಯ ಯೋಚಿಸುತ. ನಾನು ಎಂಬುದು ಬಿಟ್ಟು ನನ್ನವರು ಎಂದು ಯೋಚಿಸುತ್ತಿದ ನನಗೆ ಇಂದು ಬಿಡುಗಡೆಯ ದಿನ. ನನ್ನವರು ಎನ್ನುವವರು ಮನಸಿನಿಂದ ದೂರವಾದರೆ? ಇಲ್ಲ. ಆದರೆ ಮನಸೇ ಮರಣವಾದಾಗ ಇನ್ನೂ ಏನಾದರು ಇದೆಯೇ ಆ ಮನಸಿನಲಿ. ಯಾರಾದರೂ ಇರುವರೆ ಆ ಮನಸಿನಲಿ? ಅರಿವಿಲ್ಲ ಈ ಮನಸಿಗೆ. ಅದು ತಿಳಿದಿದ್ದರೆ ಇಂದು ಇಲ್ಲವಾಗುತ್ತಿತ್ತೆ ಈ ಮನಸು?
ನೊಂದಿರುವ ನನ್ನ ನತದೃಷ್ಟ ಜೀವನಕ್ಕೆ ಯಾರಿಲ್ಲ. ಇದು ನನ್ನ ತಪ್ಪೇ? ನಾನು ಕೆಟ್ಟವನೇ? ಇತರರ ಹಿತವಾಗಿ ಬಯಸಿದ ನನ್ನ ಮನಸಿನ ತಪ್ಪೇ? ನನ್ನ ಬಗ್ಗೆ ಯೋಚಿಸದ ನಾನೇ ದುಷ್ಟನೇ? ತಪ್ಪು ಸರಿಗಳ ನಿರ್ಧಾರ ಮಾಡುವವನಾರು? ದೇವರು? ಏಕೋ ಅನಿಸುತ್ತಿದೆ ಆ ದೇವರೇ ನನ್ನ ಪರವಾಗಿ ಇಲ್ಲ ಎಂದು. ನೋವಿನಿಂದ ನೊಂದಿರುವ ಪುರುಷನಿಗೆ ಪರಿಹಾರ ಏನು. ನಾನು ಒಂದು ಜೀವ ನಂಗು ನೋವಾಗುತ್ತೆ ಆದರೆ ಅದು ಕಾಣದಿರಬಹುದು. ಕಂಡರೂ ಏನು ಪ್ರಯೋಜನ ಈ ಜನರೆಲ್ಲರೂ ದುಡ್ಡಿನ ವ್ಯಾಮೋಹದಲ್ಲಿ ಬಿದ್ದಿರಲು. ಬಡವ ನಾನು ಅಷ್ಟೊಂದು ದುಡ್ಡಿಲ್ಲ, ಗೆಳೆಯರಿಲ್ಲ, ಜನಬಲವಿಲ್ಲ, ಅಧಿಕಾರವಿಲ್ಲ ಕೊನೆಗೆ ಇದನೆಲ್ಲ ಬೇಕೆನ್ನುವ ವ್ಯಾಮೋಹವು ಇಲ್ಲ.
ನಿಜವಾಗಿಯೂ ಬಡವನು ನಾನೀಗ, ನನ್ನ ಮನಸು ಕೂಡ ಈಗಿಲ್ಲ ನನ್ನ ಬಳಿ. ಎಂದಿಗೋ ಮರಣ ಹೊಂದಿತು ನನ್ನವರೇ ನನ್ನ ತಿರಸ್ಕರಿಸಿದಾಗ, ಕಿರುಚಾಡಿ ಬೈದಾಗ, ನಾಯಿಯಂತ ನೋಡಿದಾಗ. ವಿಚಾರಿಸುವವರು ಯಾರೂ ಇಲ್ಲ. ಇದೇ ಹೊಸ ಸಂಬಂಧದ ಹುಡುಕಾಟಕ್ಕೆ ದಾರಿಯೋ ಅಥವಾ ಎಲ್ಲವನ್ನು ತ್ಯಜಿಸುವ ಆರಂಭವೋ?