ಮರಣ ಹೊಂದಿದೆ ಮನಸು
ಮುಂದೆ ಏನಾಗಬಹುದು ಎಂದು ತಿಳಿಯದ ನನ್ನ ಮನಸಿಗೆ, ನಾನು ಮುಂದೆ ಏನಾಗಬೇಕು ಎನ್ನುವ ಯೋಚನೆಯಿಲ್ಲ. ತನ್ನವರಿಗೆ ತಾವಾಗದ ಈ ಸಮಯದಲಿ ನನಗೆಲ್ಲರೂ ನನ್ನವರೇ. ಹೌದು ನಾನು ದೂರಾಲೋಚನೆಯ ವ್ಯಕ್ತಿಯಲ್ಲ ಆದರೆ ಕೆಟ್ಟವನಲ್ಲ. ನನ್ನ ಪ್ರಯತ್ನಗಳಿಗೆ ಒಳ್ಳೆಯ...
ಮುಂದೆ ಏನಾಗಬಹುದು ಎಂದು ತಿಳಿಯದ ನನ್ನ ಮನಸಿಗೆ, ನಾನು ಮುಂದೆ ಏನಾಗಬೇಕು ಎನ್ನುವ ಯೋಚನೆಯಿಲ್ಲ. ತನ್ನವರಿಗೆ ತಾವಾಗದ ಈ ಸಮಯದಲಿ ನನಗೆಲ್ಲರೂ ನನ್ನವರೇ. ಹೌದು ನಾನು ದೂರಾಲೋಚನೆಯ ವ್ಯಕ್ತಿಯಲ್ಲ ಆದರೆ ಕೆಟ್ಟವನಲ್ಲ. ನನ್ನ ಪ್ರಯತ್ನಗಳಿಗೆ ಒಳ್ಳೆಯ ಮಾತನು ಆಡುವವರೇ ಇಲ್ಲ ಆದರೂ ನಾನಿರುವೇ ಒಳ್ಳೆಯ ಯೋಚಿಸುತ. ನಾನು ಎಂಬುದು ಬಿಟ್ಟು ನನ್ನವರು ಎಂದು ಯೋಚಿಸುತ್ತಿದ ನನಗೆ ಇಂದು ಬಿಡುಗಡೆಯ ದಿನ. ನನ್ನವರು ಎನ್ನುವವರು ಮನಸಿನಿಂದ ದೂರವಾದರೆ? ಇಲ್ಲ. ಆದರೆ ಮನಸೇ ಮರಣವಾದಾಗ ಇನ್ನೂ ಏನಾದರು ಇದೆಯೇ ಆ ಮನಸಿನಲಿ. ಯಾರಾದರೂ ಇರುವರೆ ಆ ಮನಸಿನಲಿ? ಅರಿವಿಲ್ಲ ಈ ಮನಸಿಗೆ. ಅದು ತಿಳಿದಿದ್ದರೆ ಇಂದು ಇಲ್ಲವಾಗುತ್ತಿತ್ತೆ ಈ ಮನಸು? ನೊಂದಿರುವ ನನ್ನ ನತದೃಷ್ಟ ಜೀವನಕ್ಕೆ ಯಾರಿಲ್ಲ. ಇದು ನನ್ನ ತಪ್ಪೇ? ನಾನು ಕೆಟ್ಟವನೇ? ಇತರರ ಹಿತವಾಗಿ ಬಯಸಿದ ನನ್ನ ಮನಸಿನ ತಪ್ಪೇ? ನನ್ನ ಬಗ್ಗೆ ಯೋಚಿಸದ ನಾನೇ ದುಷ್ಟನೇ? ತಪ್ಪು ಸರಿಗಳ ನಿರ್ಧಾರ ಮಾಡುವವನಾರು? ದೇವರು? ಏಕೋ ಅನಿಸುತ್ತಿದೆ ಆ ದೇವರೇ ನನ್ನ ಪರವಾಗಿ...