Kannada Essay Namma Kere Nammura Kere ಕನ್ನಡ ಪ್ರಬಂಧ ನಮ್ಮ ಕೆರೆ ನಮ್ಮೂರ ಕೆರೆ

Kannada Essay Namma Kere Nammura Kere ಕನ್ನಡ ಪ್ರಬಂಧ ನಮ್ಮ ಕೆರೆ ನಮ್ಮೂರ ಕೆರೆ

ಸ್ವಾಭಾವಿಕವಾಗಿ ಬರುವ ಮಳೆಯ ನೀರನ್ನು ಸಂಗ್ರಹಿಸುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಾಗಲೆಂಬ ದೃಷ್ಟಿಯಿಂದ ನೀರನ್ನು ಕೆರೆಗಳಿಗೆ ಹರಿಸಿಕೊಂಡು ಸಂಗ್ರಹಿಸಿ ಬಳಕೆ ಮಾಡುವುದು ವಾಡಿಕೆ.

ನಮ್ಮ ಕೆರೆ ಅಂದರೆ ನಮ್ಮ ಊರಿನ ಕೆರೆ ಊರಿನ ಮಧ್ಯಭಾಗದಲ್ಲಿ ಇದೆ. ಗ್ರಾಮಸ್ಥರು ಬಹಳ ಮೊದಲು ಕೆರೆಯ ನೀರನ್ನು ಕುಡಿಯಲು ಮತ್ತು ಬಟ್ಟೆ ಒಗೆಯಲು ಬಳಸುತ್ತಿದ್ದರು. ಆದರೆ ಈಗ ನೀರಿನ ಅಭಾವ ಇಲ್ಲವಾದ್ದರಿಂದ ಈ ನೀರು ಕುಡಿಯಲು ಬಳಸುವುದಿಲ್ಲ.ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳು ಇಲ್ಲಿ ಆಟವಾಡುತ್ತಾರೆ. ಚೌತಿಯ ಸಂಧರ್ಭದಲ್ಲಿ ಇಲ್ಲಿಯೆ ಗಣಪತಿ ವಿಸರ್ಜನೆ ಮಾಡಲಾಗುತ್ತದೆ.

ನಮ್ಮ ಊರಿನ ಯುವಕ ಯುವತಿಯರು ಸೇರಿ ಕೆಲವೊಮ್ಮೆ ಇಲ್ಲಿನ ಸ್ವಚ್ಚತೆ ಮಾಡುತ್ತಾರೆ. ಕೆರೆಯ ಸುತ್ತಲು ಕಟ್ಟೆಯನ್ನು ನಿರ್ಮಿಸಲಾಗಿದೆ. ಕೆರೆಯ ಸುತ್ತಲೂ ರಕ್ಷಣೆಗಾಗಿ ಗೋಡೆಯನ್ನು ನಿರ್ಮಿಸಿದ್ದಾರೆ.

ಎಷ್ಟೋ ಊರುಗಳಲ್ಲಿ ಕೆರೆಗಳೇ ಕೃಷಿಯ ಮತ್ತು ಕುಡಿಯುವ ನೀರಿನ ಮೂಲಗಳಾಗಿರುತ್ತವೆ. ಆದ್ದರಿಂದ ನಾವೆಲ್ಲರೂ ಕೆರೆಗಳನ್ನು ರಕ್ಷಿಸಬೇಕು.

Leave a Reply

Your email address will not be published. Required fields are marked *

Previous post ಕನ್ನಡ ಚಿತ್ರ ಮಾರ್ಟಿನ್ ಬಿಡುಗಡೆಗೆ ಸಿದ್ಧ kannada movie Martin ready for release
Next post Different Dance Forms in India – School Essay

Recent Comments

No comments to show.