ಕನ್ನಡ ಚಿತ್ರ ಮಾರ್ಟಿನ್ ಬಿಡುಗಡೆಗೆ ಸಿದ್ಧ  kannada movie Martin ready for release

ಕನ್ನಡ ಚಿತ್ರ ಮಾರ್ಟಿನ್ ಬಿಡುಗಡೆಗೆ ಸಿದ್ಧ kannada movie Martin ready for release

ಸ್ಯಾಂಡಲ್‌ವುಡ್‌ ಸಿನಿಮಾಗಳು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ಸಾಲು ಸಾಲಾಗಿ ನಿಂತಿವೆ. ಕಬ್ಜಾ ನಂತರ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್‌ ಟೀಸರ್‌ ಬಿಡುಗಡೆಯಾಗಿದ್ದು, ಇದೂ ಸಹ ಭಾರತ...
ಸ್ಯಾಂಡಲ್‌ವುಡ್‌ ಸಿನಿಮಾಗಳು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ಸಾಲು ಸಾಲಾಗಿ ನಿಂತಿವೆ. ಕಬ್ಜಾ ನಂತರ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್‌ ಟೀಸರ್‌ ಬಿಡುಗಡೆಯಾಗಿದ್ದು, ಇದೂ ಸಹ ಭಾರತ ಸಿನಿರಂಗದಲ್ಲಿ ದಾಖಲೆ ಬರೆಯುವ ವಿಶ್ವಾಸ ಮೂಡಿಸಿದೆ. ಮಾರ್ಟಿನ್‌ ಚಿತ್ರದ ವಿಶೇಷ ಅಂದ್ರೆ, ಈ ಸಿನಿಮಾದ ಕಥೆಯನ್ನು ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರು ಬರೆದಿದ್ದು, ಚಿತ್ರದ ಮೇಲಿನ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ʼಮಾರ್ಟಿನ್ʼ ರೋಚಕ ಕಥೆಯನ್ನು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬರೆದಿದ್ದಾರೆ. ಈ ಕಂಪ್ಲೀಟ್‌ ಆಕ್ಷನ್ ಎಂಟರ್‌ಟೈನರ್ ಚಲನಚಿತ್ರವನ್ನು ಎ ಪಿ ಅರ್ಜುನ್ ನಿರ್ದೇಶಿಸಿದ್ದಾರೆ. ಮಣಿ ಶರ್ಮಾ ಮತ್ತು ರವಿ ಬಸ್ರೂರ್ ಹಾಡುಗಳನ್ನು ಸಂಯೋಜಿಸಿದ್ದಾರೆ. ಸತ್ಯ ಹೆಗಡೆ ಅ‍ದ್ದೂರಿ ಛಾಯಾಗ್ರಹಣ ಈ ಸಿನಿಮಾಗಿದೆ. ಕೆಎಂ ಪ್ರಕಾಶ್ ಸಂಕಲನ ಈ ಸಿನಿಮಾವನ್ನು ವಾಸವಿ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಉದಯ್ ಕೆ ಮೆಹ್ತಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಮತ್ತು ವೈಭವಿ ಶಾಂಡಿಲ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಚ್ಯುತ್...
ಶ್ರೇಯಸ್‌ಗೆ ಪ್ರಿಯಾಂಕಾ ಜೋಡಿ

ಶ್ರೇಯಸ್‌ಗೆ ಪ್ರಿಯಾಂಕಾ ಜೋಡಿ

ಕೆಲವರ ಮೊದಲ ಚಿತ್ರ ಬಿಡುಗಡೆಯಾಗುವುದಕ್ಕೂ ಮೊದಲು ಇನ್ನಷ್ಟು ಅವಕಾಶಗಳು ಅರಸಿ ಬರುತ್ತವೆ. ಆ ಸಾಲಿಗೆ ಇದೀಗ ಪ್ರಿಯಾಂಕಾ ಕುಮಾ‌ರ್ ಸಹ ಸೇರುತ್ತಾರೆ. ಪ್ರಿಯಾಂಕಾ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಅವರು ಅಭಿನಯಿಸಿರುವ ಯಾವ...
ಕೆಲವರ ಮೊದಲ ಚಿತ್ರ ಬಿಡುಗಡೆಯಾಗುವುದಕ್ಕೂ ಮೊದಲು ಇನ್ನಷ್ಟು ಅವಕಾಶಗಳು ಅರಸಿ ಬರುತ್ತವೆ. ಆ ಸಾಲಿಗೆ ಇದೀಗ ಪ್ರಿಯಾಂಕಾ ಕುಮಾ‌ರ್ ಸಹ ಸೇರುತ್ತಾರೆ. ಪ್ರಿಯಾಂಕಾ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಅವರು ಅಭಿನಯಿಸಿರುವ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಹಾಗೂ ವಿರಾಟ್ ಅಭಿನಯದ 'ಅದ್ದೂರಿ ಲವರ್' ಸಿನಿಮಾಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದು, ಎರಡೂ ಚಿತ್ರಗಳೂ ಇನ್ನಷ್ಟೇ ಬಿಡುಗಡೆಯಾಗಬೇಕಿವೆ. ಈ ಮಧ್ಯೆ, ಅವರು ಶ್ರೇಯಸ್ ಮಂಜು ಅಭಿನಯದ ಹೊಸ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದ್ದು, ಮಧು ಗೌಡ ಗಂಗೂರು ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಲವ್ ಸ್ಟೋರಿಯಾಗಿದ್ದು, ಕಾಲೇಜ್ ಹುಡುಗಿಯಾಗಿ ಪ್ರಿಯಾಂಕಾ ನಟಿಸುತ್ತಿದ್ದಾರಂತೆ. ಅರ್ಜುನ್ ಜನ್ಯ ಸಂಗೀತ ಮತ್ತು ಗಗನ್ ಗೌಡ ಛಾಯಾಗ್ರಹಣವಿರುವ ಈ ಚಿತ್ರವನ್ನು ಏಷ್ಯಾನೆಟ್ ಮೂವೀ ಬ್ಯಾನರ್‌ನಡಿ ಆರ್. ಸಂತೋಷ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅಂದ ಹಾಗೆ, ಪ್ರಿಯಾಂಕಾ ಅಭಿನಯದ ಮೊದಲ ಚಿತ್ರ 'ಬ್ಯಾಡ್ ಮ್ಯಾನರ್ಸ್ ಮೇನಲ್ಲಿ ಬಿಡುಗಡೆಯಾಗಲಿದೆ. More Photos...
”ಸೈಂಧವ”ನ ಜೊತೆಗೆ ಶ್ರದ್ಧಾ ಶ್ರೀನಾಥ್

”ಸೈಂಧವ”ನ ಜೊತೆಗೆ ಶ್ರದ್ಧಾ ಶ್ರೀನಾಥ್

ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಈಗಾಗಲೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್ಲ ಭಾಷೆಗಳಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟರೂ ಅದ್ಯಾಕೋ ಅವರಿಗೆ ಅವಕಾಶಗಳು ಕಡಿಮೆ ಎಂದರೆ...
ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಈಗಾಗಲೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್ಲ ಭಾಷೆಗಳಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟರೂ ಅದ್ಯಾಕೋ ಅವರಿಗೆ ಅವಕಾಶಗಳು ಕಡಿಮೆ ಎಂದರೆ ತಪ್ಪಿಲ್ಲ, ತೆಲುಗಿನಲ್ಲಿ 'ಜೆರ್ಸಿ'ಯಂತಹ ಹಿಟ್ ಚಿತ್ರದ ಭಾಗವಾದರೂ ಆ ನಂತರ ಅವರು ಅಲ್ಲಿ ನಟಿಸಿದ್ದು ಕಡಿಮೆಯೇ. ಈಗ ಒಂದೆರಡು ವರ್ಷಗಳ ಗ್ಯಾಪ್‌ನ ನಂತರ ಶ್ರದ್ಧಾ ತೆಲುಗಿನ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದೇ 'ಸೈಂಧವ'. ಇದು ವಿಕ್ಟರಿ ವೆಂಕಟೇಶ್ ಅಭಿನಯದ 75ನೇ ಚಿತ್ರವಾಗಿದ್ದು, ಕಳೆದ ತಿಂಗಳು ಪ್ರಾರಂಭವಾಗಿತ್ತು. ಆಗ ಚಿತ್ರದ ನಾಯಕಿಯ ಘೋಷಣೆಯಾಗಿರಲಿಲ್ಲ. ಈಗ ಚಿತ್ರತಂಡವು ಶ್ರದ್ಧಾ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಯಾರೆಂದು ಘೋಷಿಸಿದೆ. ಈ ಸಿನಿಮಾದಲ್ಲಿ ಮನೋಜ್ಞಾ ಎಂಬ ಪಾತ್ರದಲ್ಲಿ ಶ್ರದ್ಧಾ ಬಣ್ಣ ಹಚ್ಚಿದ್ದಾರೆ. ಸೀರೆಯುಟ್ಟು ಹೋಮ್ಮಿ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಶ್ರದ್ಧಾ, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದು ಸೀರಿಯಸ್‌ ಲುಕ್‌ನಲ್ಲಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ...