ತ್ರಿದೇವಿ ಚಿತ್ರದಲ್ಲಿ ಹೊಡೆದಾಟಕ್ಕಿಳಿದ ಶುಭಾ ಪೂಂಜ

ತ್ರಿದೇವಿ ಚಿತ್ರದಲ್ಲಿ ಹೊಡೆದಾಟಕ್ಕಿಳಿದ ಶುಭಾ ಪೂಂಜ

ಶುಭಾ ಪೂಂಜ ಎಂದರೆ ಗ್ಲಾಮರಸ್ ಪಾತ್ರಗಳಿಗೆ ಸೈ ಎಂಬ ಮಾತಿತ್ತು. ಆದರೆ ಶುಭಾ ಈಗ ಅದನ್ನು ಸುಳ್ಳು ಮಾಡಿದ್ದಾರೆ. ಮೊದಲ “ಬಾರಿಗೆ 'ತ್ರಿದೇವಿ' ಎಂಬ ಆ್ಯಕ್ಷನ್ ಚಿತ್ರ ಮತ್ತು `ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ...
ಶುಭಾ ಪೂಂಜ ಎಂದರೆ ಗ್ಲಾಮರಸ್ ಪಾತ್ರಗಳಿಗೆ ಸೈ ಎಂಬ ಮಾತಿತ್ತು. ಆದರೆ ಶುಭಾ ಈಗ ಅದನ್ನು ಸುಳ್ಳು ಮಾಡಿದ್ದಾರೆ. ಮೊದಲ “ಬಾರಿಗೆ 'ತ್ರಿದೇವಿ' ಎಂಬ ಆ್ಯಕ್ಷನ್ ಚಿತ್ರ ಮತ್ತು `ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದ ಕುರಿತು ಮಾತನಾಡುವ ಶುಭಾ 'ಹೊಸತನದ ಪಾತ್ರ ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ನನಗೆ ಸಿಕ್ಕ ಚಿತ್ರವೇ 'ತ್ರಿದೇವಿ'. ನನ್ನ ನಿರೀಕ್ಷೆಗೆ ತಕ್ಕ ಹಾಗೆ ಚಿತ್ರದಲ್ಲಿ ಪಾತ್ರ ಇತ್ತು. ನನ್ನ ಪಾತ್ರ ಮತ್ತು ಕಥೆ ಎರಡೂ ಬಹಳ ಇಷ್ಟವಾಯಿತು. ಹಾಗಾಗಿ ಒಪ್ಪಿದೆ. ಹೆಸರೇ ಹೇಳುವಂತೆ, ಮೂವರು ಹುಡುಗಿಯರ ಸುತ್ತ ಸುತ್ತುವ ಚಿತ್ರವಿದು. ಇದೊಂದು ಆ್ಯಕ್ಷನ್ ಸಿನಿಮಾ ಆಗಿದ್ದು, ಪಾತ್ರಕ್ಕಾಗಿ ಹಲವು ತಿಂಗಳುಗಳ ಕಾಲ ವರ್ಕೌಟ್ ಮಾಡಿದ್ದೇನೆ. ಈ ಚಿತ್ರದಲ್ಲಿ ಬರೀ ನಟಿಯಾಗಿಯಷ್ಟೇ ಅಲ್ಲ, ಬೇರೆ ಹಂತಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಈ ಚಿತ್ರದ ಮೂಲಕ ಒಂದು ಸಿನಿಮಾ ಹೇಗೆ ಆಗುತ್ತದೆ. ಎಂಬ ಪ್ರಕ್ರಿಯೆ ಬಹಳ ಚೆನ್ನಾಗಿ ಅರ್ಥವಾಯ್ತು' ಎನ್ನುತ್ತಾರೆ. ಅಶ್ವಿನ್ ಮ್ಯಾಥ್ಯ...