ಫುಲ್ ಮೀಲ್ಸ್‌ನಲ್ಲಿ ಖುಷಿ ರವಿ
`ದಿಯಾ ಖ್ಯಾತಿಯ ಖುಷಿ ರವಿ ಅಭಿನಯದ 'ಸ್ಪೂಕಿ ಕಾಲೇಜ್' ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿತ್ತು. ಆದರೆ ಅದು ಹೆಚ್ಚು ಸುದ್ದಿಯಾಗಲಿಲ್ಲ. ಈಗ ಅವರು ಸದ್ದಿಲ್ಲದೆ ಇನ್ನೊ೦ದು ಹೊಸ ಚಿತ್ರವನ್ನು ಮುಗಿಸಿದ್ದಾರೆ. ಅದೇ 'ಫುಲ್ ಮೀಲ್'....
`ದಿಯಾ ಖ್ಯಾತಿಯ ಖುಷಿ ರವಿ ಅಭಿನಯದ 'ಸ್ಪೂಕಿ ಕಾಲೇಜ್' ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿತ್ತು. ಆದರೆ ಅದು ಹೆಚ್ಚು ಸುದ್ದಿಯಾಗಲಿಲ್ಲ. ಈಗ ಅವರು ಸದ್ದಿಲ್ಲದೆ ಇನ್ನೊ೦ದು ಹೊಸ ಚಿತ್ರವನ್ನು ಮುಗಿಸಿದ್ದಾರೆ. ಅದೇ 'ಫುಲ್ ಮೀಲ್'. ಈಗಾಗಲೇ ಈ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. 'ಸಂಕಷ್ಟಕರ ಗಣಪತಿ' ಹಾಗೂ 'ಫ್ಯಾಮಿಲಿ ಪ್ಯಾಕ್' ಚಿತ್ರಗಳಲ್ಲಿ ಗಮನಸೆಳೆದಿದ್ದ ಲಿಖಿತ್ ಶೆಟ್ಟಿ ಈ ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ಮಾಣವನ್ನೂ ಮಾಡುತ್ತಿದ್ದಾರೆ. More Photos and Videos - Kushee Ravi ಇಲ್ಲಿ ಖುಷಿ ಮಾತ್ರವಲ್ಲ, ತೇಜಸ್ವಿನಿ ಶರ್ಮ ಸಹ ಇನ್ನೊಬ್ಬ ನಾಯಕಿ, ವಿನಾಯಕ ಎನ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ. ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧು ಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್ ಶಾಸ್ತ್ರಿ...