ಭೂಮಿ ಶೆಟ್ಟಿ ಅವರು ಕನ್ನಡ ಭಾಷೆಯ ದೂರದರ್ಶನ ಸರಣಿ ಕಿನ್ನರಿ ಮತ್ತು ತೆಲುಗು ಸರಣಿ ನಿನ್ನೇ ಪಲ್ಲದತದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಭಾರತೀಯ ನಟಿ. ಅವರು ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿದ್ದರು ಮತ್ತು ಫೈನಲ್‌ಗೆ ಬಂದರು. ಶೆಟ್ಟಿ 2021 ರ ಕನ್ನಡ ಚಲನಚಿತ್ರ, ಇಕ್ಕಟ್‌ನೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇಕ್ಕಟ್ ಚಿತ್ರ ಅಮೆಜಾನ್ ಪ್ರೈಮನಲ್ಲಿ ವೀಕ್ಷಿಸಲು ಲಭ್ಯವಿದೆ.
ಕನ್ನಡದಿಂದ ತೆಲುಗು ಚಿತ್ರರಂಗದತ್ತ ಮುಖ ಮಾಡಿರುವ ನಟಿ ಭೂಮಿ ಶೆಟ್ಟಿ ತಮ್ಮ ಬೋಲ್ಡ್ ಅವತಾರಗಳಿಂದ ಸದ್ಯ ಸಕತ್ ಚರ್ಚೆಯಲ್ಲಿದ್ದಾರೆ. ನಟಿ ಭೂಮಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಇತ್ತೀಚೆಗೆ ಒಂದಾದ ಮೇಲೊಂದರಂತೆ ಸಾಲು ಸಾಲು ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ವಿಭಿನ್ನ ಅವತಾರಗಳಲ್ಲಿ ಫೋಟೋಶೂಟ್ ಮಾಡಿಸುವ ಅವರ ಇತ್ತೀಚಿನ ಹಾಟ್ ಪೋಟೋಗಳು ಸಕತ್ ವೈರಲ್ ಆಗಿವೆ.






