ಕಣ್ಣುಗಳು ಏನೋ ಹೇಳಿದೆ – ಕನ್ನಡ ಕವನ
ಕಣ್ಣುಗಳು ಏನೋ ಹೇಳಿದೆ ಮುಗುಳ್ನಗೆ ಅದ ಮುಚ್ಚಿಟ್ಟಿದೆ ಹೇಳಿದರು ಹೇಳದಿದ್ದರೂ ಏನು ಪ್ರಯೋಜನ ಸ್ಪಂದಿಸುವ ಜನರಿಲ್ಲ ಜಗದಲಿ ಸೂರ್ಯನ ಸಂಜೆಯಲಿ ದಿನವು ಮುಗಿದಿದೆ ಚಂದ್ರನ ನೋಟಕೆ ಇಳೆ ತಂಪಾಗಿದೆ ದಿನ ಕಳೆದರೆ ಕತ್ತಲು ಕತ್ತಲು...
ಕಣ್ಣುಗಳು ಏನೋ ಹೇಳಿದೆ ಮುಗುಳ್ನಗೆ ಅದ ಮುಚ್ಚಿಟ್ಟಿದೆ ಹೇಳಿದರು ಹೇಳದಿದ್ದರೂ ಏನು ಪ್ರಯೋಜನ ಸ್ಪಂದಿಸುವ ಜನರಿಲ್ಲ ಜಗದಲಿ ಸೂರ್ಯನ ಸಂಜೆಯಲಿ ದಿನವು ಮುಗಿದಿದೆ ಚಂದ್ರನ ನೋಟಕೆ ಇಳೆ ತಂಪಾಗಿದೆ ದಿನ ಕಳೆದರೆ ಕತ್ತಲು ಕತ್ತಲು ಮುಗಿದು ಮತ್ತೆ ಬೆಳಕು ಈ ದಿನ ಕಳೆದು ಇನ್ನೊಂದು ದಿನ ಆದರೆ ಪ್ರತಿ ದಿನವೂ ಬೇರೊಂದು ದಿನ ಹೊಸತೊಂದು ಆಶಯ ನವತನದ ನಿರೀಕ್ಷೆ ಪ್ರತಿ ದಿನವೂ ಹೊಸತನ್ನು ತರಲಿ ಯಶಸ್ಸಿನ ಕಡೆಗೆ ಪ್ರಯತ್ನವು ಇರಲಿ ಕತ್ತಲು ಜೊತೆಗೆ ಇರುವುದು ನೆನಪಿರಲಿ ಬೆಳಕು ಕತ್ತಲುಗಳ ಪರಿಚಯವು ಇರಲಿ Photo Credits - Tanya Sinha 1420